ಸೆಡಿಮೆಂಟ್ ಸೈಟಾಲಜಿ -
	ಅವಸಾದನ ಕೋಶಿಕಾವಿe್ಞÁನ. ರೋಗನಿದಾನವಿe್ಞÁನದ (ಡಯಗ್ನೋಸ್ಟಿಕ್ಸ್) ಒಂದು ಪ್ರಮುಖ ಶಾಖೆ. ಯಾವುದೇ ದ್ರವದಲ್ಲಿ ನಿಲಂಬಿತವಾಗಿರುವ ಕಣಗಳು ಕ್ರಮೇಣ ಆ ಪಾತ್ರೆಯ ತಳ ಸೇರಿ ಮಡ್ಡಿಗಟ್ಟುತ್ತವೆ. ಅಂದ ಮೇಲೆ ಇಂಥ ಒಂದು ದ್ರಾವಣ ಮಾದರಿಯಲ್ಲಿ ಜೀವಕೋಶಗಳು ಬೆರೆತಿದ್ದರೆ ಅವೂ ಹಾಗೆ ಮಡ್ಡಿಗಟ್ಟುವುದು ಸಹಜ. ಈ ಮಡ್ಡಿಯನ್ನು ವಿಶ್ಲೇಷಿಸಿ ಆ ಕೋಶಗಳು ಸಾಮಾನ್ಯವಾದವೋ ಕ್ಯಾನ್ಸರ್ ಸಂಬಂಧವಾದವೋ ಎಂದು ನಿರ್ಧರಿಸುವುದು ಸಾಧ್ಯವಾಗಬೇಕು. ಈ ನೂತನ ವಿಧಾನವನ್ನು ಶೋಧಿಸಿ (1985) ಇದಕ್ಕೆ ಸೆಡಿಮೆಂಟ್ ಸೈಟಾಲಜಿ ಎಂಬ ಹೆಸರಿತ್ತವರು ಆಗ ಬೆಳಗಾಂವಿಯ ಜೆ. ಎಸ್. ಮೆಡಿಕಲ್ ಕಾಲೇಜಿನಲ್ಲಿ ರೋಗವಿe್ಞÁನತಜ್ಞರಾ ಗಿದ್ದ (ಪೆಥಾಲಜಿಸ್ಟ್) ಸ. ಜ. ನಾಗಲೋಟಿಮಠ (1940).

	ಬಂಡೆಗಲ್ಲನ್ನು ಒಡೆದಾಗ ಅದರ ಒಂದಂಶ ಪುಡಿಯಾಗಿ ಉದುರುತ್ತದೆ. ಈ ಪುಡಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಬಂಡೆಯ ಸಂಯೋಜನೆ ತಿಳಿಯಬಹುದು. ಹಾಗೆಯೆ ಶರೀರದ ಒಂದು ತುಣುಕಿನ ತಪಾಸಣೆಯಿಂದ ದೇಹ ಕುರಿತಂತೆ ಅನೇಕ ವಿವರಗಳನ್ನು ಅರಿಯುವುದು ಸಾಧ್ಯವಿದೆ. ಇದರ ತಂತ್ರ ಬಲು ಸರಳ. ದೇಹದಲ್ಲಿಯ ಗಂಟಿನ ಅಥವಾ ಹುಣ್ಣಿನ ತುಣುಕನ್ನು ಕತ್ತರಿಸಿ ತೆಗೆದು ಫಾರ್ಮಾಲಿನ್ ದ್ರವದಲ್ಲಿ ಮುಳುಗಿಸಬೇಕು. ಬಳಿಕ ಈ ದ್ರವವನ್ನು ಕೇಂದ್ರಾಪಕದಲ್ಲಿ (ಸೆಂಟ್ರಿಫ್ಯೂಜ್) ಕಡೆದಾಗ ತಳದಲ್ಲಿ ಶೇಖರವಾಗುವ ಗಸಿಯನ್ನು (ಇದೇ ಅವಸಾದನ) ಗಾಜಿನ ಸ್ಲೈಡ್ ಮೇಲೆ ಬಳಿದು ಬಣ್ಣ ಕೊಟ್ಟು ಪರೀಕ್ಷಿಸಬೇಕು. ಕೋಶಗಳ ಆಕಾರ, ರಚನೆ, ಬಣ್ಣ, ವಿಭಜನೆಯ ಪ್ರಮಾಣ ಮುಂತಾದವನ್ನು ಇದರಿಂದ ನಿರ್ಧರಿಸಬಹುದು. ಅಲ್ಲದೇ ಮೂಲ ಕೋಶಗಳು ಸಹಜವಾದವೋ ಕ್ಯಾನ್ಸರ್‍ಬಾಧಿತವೋ ಎಂದು ಸಹ ತೀರ್ಮಾನಿಸುವುದು ಸಾಧ್ಯವಿದೆ. ಅವಸಾದನ ಕೋಶಿಕಾವಿe್ಞÁನದ ಮುಖ್ಯ ತತ್ತ್ವವಿದು. 

	ಈ ವಿಧಾನ ಪ್ರಸಿದ್ಧಿಗೆ ಬರುವ ಮೊದಲು ಕ್ಯಾನ್ಸರ್ ರೋಗನಿದಾನ ದಿನಗಳಿಂದ ಒಂದು ವಾರದ ತನಕ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಕೇವಲ 3 ತಾಸುಗಳಲ್ಲೇ ಈ ಪರೀಕ್ಷೆಯ ಫಲಿತಾಂಶ ಗೊತ್ತಾಗುತ್ತದೆ. ಮುಖ್ಯವಾಗಿ ಎಲುವಿನ ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಅವಸಾದನ ಕೋಶಿಕಾವಿe್ಞÁನ ಒಂದು ದಕ್ಷ, ಉಪಯುಕ್ತ ಮತ್ತು ಕ್ಷಿಪ್ರ ಸಾಧನ.		
		(ಎಸ್.ಜೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ